"ದೇಶ ಮೊದಲು ಸಂವಾದ "
ಅನಂತಕುಮಾರ್ ಪ್ರತಿಷ್ಠಾನ “ದೇಶಮೊದಲು” ಎಂಬ ಅಂತಾರಾಷ್ಟ್ರೀಯ ವೆಬಿನಾರ್ ಏರ್ಪಡಿಸುತ್ತಿದ್ದು, ಇದರಲ್ಲಿ ಸಮಕಾಲೀನ ವಿಷಯಗಳ ಬಗೆಗೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗೆಗೆ ತಜ್ಞರು ವೆಬಿನಾರ್ ನಡೆಸಿಕೊಡುತ್ತಾರೆ. ಈಗಾಗಲೇ ಈ ರೀತಿಯ ಹತ್ತು ಅಂತಾರಾಷ್ಟ್ರೀಯ ವೆಬಿನಾರ್‌ಗಳು ನಡೆದಿದ್ದು ಹಲವಾರು ಜನ ಈ ಸಂವಾದಗಳಲ್ಲಿ ಭಾಗವಹಿಸುತ್ತಿದ್ದಾರೆ.
ನೇಷನ್ ಫಸ್ಟ್ ಡೈಲಾಗ್ಸ್ ಎನ್ನುವುದು ನಾಯಕತ್ವ ಅಭಿವೃದ್ಧಿಯ ಉಪಕ್ರಮದ ಭಾಗವಾಗಿ ಕೋವಿಡ್ ವಿರುದ್ಧದ ಸಮರದಲ್ಲಿ ಸ್ವಾವಲಂಬಿ ಭಾರತ ,ಆತ್ಮನಿರ್ಭರ್ ಭಾರತ್: 5G - ಅವಕಾಶಗಳು ಮತ್ತು ಸಿದ್ಧತೆ,ರಾಷ್ಟ್ರೀಯ ಶಿಕ್ಷಣ ನೀತಿ,ಸಾರ್ವಜನಿಕ ಜೀವನದಲ್ಲಿ ಕೃತಕ ಬುದ್ಧಿಮತ್ತೆಯ,ಭಾರತೀಯ ಫಾರ್ಮಾ ವಲಯ – ಅವಕಾಶಗಳು ಮತ್ತು ಸವಾಲುಗಳು
ಹೀಗೆ ಅನೇಕ ವಿಷಯಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ನಾಯಕರು, ಅಭಿಪ್ರಾಯ ತಯಾರಕರು, ವಿಷಯ ತಜ್ಞರು, ಸಾಮಾನ್ಯ ಯುವಕ ಮತ್ತು ಯುವತಿಯರ ಜೊತೆ ಚರ್ಚೆಯನ್ನು ನಡೆಸಲಾಗಿದೆ.