ಅನಂತಕುಮಾರ್ ಪುರಸ್ಕಾರ
ಶ್ರೀ ಅನಂತಕುಮಾರ್ ಅವರ ಹೃದಯಕ್ಕೆ ಹತ್ತಿರವಾದ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಅನಂತಕುಮಾರ್ ಪ್ರತಿಷ್ಠಾನವನ್ನು 2019ರಲ್ಲಿ ಸ್ಥಾಪಿಸಲಾಯಿತು. ಶ್ರೀ ಅನಂತಕುಮಾರ್ (1959–2018), ಬೆಂಗಳೂರು ದಕ್ಷಿಣದಿಂದ 6 ಬಾರಿ ಸಂಸದರಾಗಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವರು ನಿಜವಾದ ಜನನಾಯಕರಾಗಿದ್ದರು. ಸಾಧಾರಣ ಹಿನ್ನೆಲೆಯಿಂದ ಬಂದ ಅವರು, ಸಂಪೂರ್ಣ ಕಠಿಣ ಪರಿಶ್ರಮ, ಭಾರತೀಯ ಮೌಲ್ಯ ವ್ಯವಸ್ಥೆಯಲ್ಲಿನ ದೃಢತೆಯ ಶಕ್ತಿ ಮತ್ತು ಅವರ ವ್ಯಕ್ತಿತ್ವದ ಮೂಲಕ ರಾಷ್ಟ್ರದ ಆಡಳಿತದ ಉನ್ನತ ಶ್ರೇಣಿಗೆ ಏರಿದರು. 1998 ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಮತ್ತು 2014 ರಲ್ಲಿ ಶ್ರೀ ನರೇಂದ್ರ ಮೋದಿಜಿಯವರ ಕ್ಯಾಬಿನೆಟ್ನಲ್ಲಿ ಕೇಂದ್ರ ಮಂತ್ರಿಯಾಗಿ ವಿವಿಧ ಖಾತೆಗಳ ಸಚಿವರಾಗಿ ಅನಂತಕುಮಾರ್ ಅವರು ಸಾಧಿಸಿದ ಕಾರ್ಯಗಳು ಸ್ಮರಣೀಯ.
ಸಮಾಜದಲ್ಲಿ ಕೊನೆಯ ಸಾಲಿನ ಕೊನೆಯ ವ್ಯಕ್ತಿಗೂ ಎಲ್ಲ ಸೌಲಭ್ಯಗಳು ತಲುಪಬೇಕು ಎನ್ನುವುದು ಅನಂತಕುಮಾರ್ ಅವರ ಸಂಕಲ್ಪವಾಗಿತ್ತು. ಅನಂತಕುಮಾರ್ ಅವರು ಯಾವಾಗಲೂ ತಮ್ಮ ಪ್ರಮುಖ ನಂಬಿಕೆಗಳಾದ “ಕಾಯಕವೇ ಕೈಲಾಸ” (ಕೆಲಸವೇ ಆರಾಧನೆ), “ರಾಷ್ಟ್ರ ಮೊದಲು” ಮತ್ತು “ವಸುಧೈವ ಕುಟುಂಬಕಂ” (ಜಗತ್ತು ಒಂದೇ ಕುಟುಂಬ) ಎಂಬ ಧೈಯವಾಕ್ಯಗಳಿಗೆ ಬದ್ಧರಾಗಿ ತಮ್ಮ ಕೊನೆಯ ಉಸಿರಿನವರೆಗೂ ಇದಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಅನಂತಕುಮಾರ್ ಅವರ ವ್ಯಕ್ತಿತ್ವ, ಕರ್ತೃತ್ವ ಮತ್ತು ನೇತೃತ್ವ ಶಕ್ತಿಗಳನ್ನೇ ಮೂಲಾಧಾರವನ್ನಾಗಿಸಿಕೊಂಡು ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದೆ.
ಅನಂತಕುಮಾರ್ ಪುರಸ್ಕಾರ
"ಸಮಾಜ ಸಾಮಾನ್ಯ ಜನರ ಕೈ ಹಿಡಿಯುತ್ತದೆ, ಆದರೆ ಸಮಾಜದ ಕೈ ಹಿಡಿಯಲು ಅಸಾಮಾನ್ಯರ ಅಗತ್ಯತೆ ಇದೆ."
— ಅನಂತಕುಮಾರ್
Nomination Form – 2026
ದೇಶ ಮೊದಲು ಧ್ಯೇಯದೊಂದಿಗೆ ಸಾಮಾಜಿಕ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅನಂತಕುಮಾರ್ ಅವರ ನೆನಪಿನಲ್ಲಿ ಈ ಪುರಸ್ಕಾರವನ್ನು ಸ್ಥಾಪಿಸಲಾಗಿದೆ. ಸಮಾಜದ ಉನ್ನತಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಸ್ಥಳೀಯರನ್ನು ಗುರುತಿಸಿ, ಪುರಸ್ಕರಿಸುವುದು ಹಾಗೂ ಈ ಪುರಸ್ಕಾರವು ಇತರರಿಗೂ ಪ್ರೇರಣೆಯಾಗುವಂತೆ ಗಮನಿಸಿವುದು ಪ್ರತಿಷ್ಠಾನದ ಉದ್ದೇಶ್ಯವಾಗಿದೆ. ಪ್ರತಿ ವರ್ಷವೂ ಒಬ್ಬ ಪುರಸ್ಕೃತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಪರ್ಯಾಯ ವರ್ಷದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳನ್ನು ಪರಿಗಣಿಸಲಾಗುವುದು.
ಮಾನದಂಡ:
- ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ (ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್) ಯಾವುದಾದರೂ ಒಂದು ಜಿಲ್ಲೆಯಲ್ಲಿ ವಾಸಿಸುತ್ತಿರಬೇಕು ಹಾಗೂ ಸಮಾಜಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರಬೇಕು.
- ಮೂಲತಃ ದಕ್ಷಿಣ ಕರ್ನಾಟಕ ಅಥವಾ ಭಾರತದ ಯಾವುದೇ ಭಾಗದವರಾಗಿದ್ದು, ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ನೆಲೆಸಿ ಅಲ್ಲಿನ ಜನರಿಗೆ ಸೇವೆ ಸಲ್ಲಿಸುತ್ತಿದ್ದರೆ, ಅವರೂ ಸಹ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
- ಸಮಾಜಕ್ಕೆ ನಿರಂತರ ಮತ್ತು ಮಾದರಿಯಾದ ಸೇವೆಯನ್ನು ಸಲ್ಲಿಸಿರಬೇಕು. ವೈಯಕ್ತಿಕ ಸಾಧನೆ ಅಥವಾ ಸ್ವಂತ ಯಶಸ್ಸಿಗಿಂತ ಹೆಚ್ಚಾಗಿ, ಸಮುದಾಯದ ಮೇಲೆ ಅವರ ಸೇವೆಯಿಂದಾದ ಸಕಾರಾತ್ಮಕ ಪ್ರಭಾವಕ್ಕೆ (Community Impact) ಮೊದಲ ಆದ್ಯತೆ ನೀಡಲಾಗುವುದು.
ಕ್ಷೇತ್ರಗಳು :
ಕೆಳಗಿನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳಿಂದ ನಾಮನಿರ್ದೇಶನಗಳನ್ನು (Nominations) ಆಹ್ವಾನಿಸಲಾಗಿದೆ:
ಆರೋಗ್ಯ ಮತ್ತು ವೈದ್ಯಕೀಯ, ಶಿಕ್ಷಣ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಕೃಷಿ, ಕೈಗಾರಿಕೆ ಮತ್ತು ಉತ್ಪಾದನೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ಗಳು, ಉದ್ಯೋಗ ಸೃಷ್ಟಿ, ಪರಿಸರ ಮತ್ತು ಸುಸ್ಥಿರತೆ, ಜಲ ಸಂರಕ್ಷಣೆ ಮತ್ತು ಕೆರೆಗಳ ಪುನರುಜ್ಜೀವನ, ಗ್ರಾಮೀಣ ಅಭಿವೃದ್ಧಿ, ಸಾರ್ವಜನಿಕ ಹಿತಕ್ಕಾಗಿ ನಾವೀನ್ಯತೆ (ಇನ್ನೋವೇಶನ್), ಕಲೆ-ಸಂಸ್ಕೃತಿ ಮತ್ತು ಪರಂಪರೆ, ದೇಶ ನಿರ್ಮಾಣಕ್ಕೆ ಸಾರ್ಥಕ ಕೊಡುಗೆ ನೀಡುತ್ತಿರುವ ಯಾವುದೇ ರಂಗ.
ಆಯ್ಕೆ ಪ್ರಕ್ರಿಯೆ :
ನಾಮನಿರ್ದೇಶನಗಳನ್ನು ಸ್ವೀಕರಿಸಿದ ನಂತರ, ಅನಂತಕುಮಾರ್ ಪ್ರತಿಷ್ಠಾನದ ಸಂವಹನ ತಂಡವು ಆಯ್ಕೆಯಾದ (Shortlisted) ಅಭ್ಯರ್ಥಿಗಳನ್ನು ಭೇಟಿ ಮಾಡಿ, ಅವರು ಮತ್ತು ಅವರು ಸೇವೆ ಸಲ್ಲಿಸುತ್ತಿರುವ ಸಮುದಾಯದೊಂದಿಗೆ ಸಂವಹನ ನಡೆಸಿ, ಅವರ ಕೆಲಸವನ್ನು ದಾಖಲಿಸಿ ವಿವರವಾದ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ.
ಈ ದಾಖಲೆಗಳನ್ನು ಮೌಲ್ಯಮಾಪನಕ್ಕಾಗಿ ಸ್ವತಂತ್ರ ತೀರ್ಪುಗಾರರ ಮಂಡಳಿಯ (Jury) ಮುಂದೆ ಮಂಡಿಸಲಾಗುವುದು.
ಯುವಕರು ದೇಶ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುವ ಸ್ಪೂರ್ತಿದಾಯಕ ವಿಚಾರಗಳನ್ನು ಆಯ್ಕೆಯಾದ ಅಭ್ಯರ್ಥಿಗಳ ವರದಿಗಳಿಂದ ತಯಾರಿಸಲಾಗುತ್ತದೆ ಮತ್ತು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತದೆ.
ಪ್ರಶಸ್ತಿ :
ಆಯ್ಕೆಯಾದ ಒಬ್ಬ ಶ್ರೇಷ್ಠ ವ್ಯಕ್ತಿಗೆ ಕೆಳಗಿನವುಗಳನ್ನು ನೀಡಿ ಗೌರವಿಸಲಾಗುವುದು:
ಅನಂತಕುಮಾರ್ ಪುರಸ್ಕಾರ
₹1,00,000 (ಒಂದು ಲಕ್ಷ ರೂಪಾಯಿ) ನಗದು ಬಹುಮಾನ
ಸನ್ಮಾನ ಪತ್ರ ಮತ್ತು ಸಾರ್ವಜನಿಕ ಗೌರವ
ಪ್ರಶಸ್ತಿ ಪ್ರದಾನ ಸಮಾರಂಭ :
ಈ ಪ್ರಶಸ್ತಿಯನ್ನು 5 ಡಿಸೆಂಬರ್ 2026 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಇಂತಹ ಅಸಾಧಾರಣ ಬದಲಾವಣೆಯ ರೂವಾರಿಗಳನ್ನು (Changemakers) ಗುರುತಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಲು ವಿನಂತಿಸುತ್ತೇವೆ. ನಿಮ್ಮ ನಾಮನಿರ್ದೇಶನವು, ಪ್ರಶಸ್ತಿಗೆ ಅರ್ಹವಾದ ಹಾಗೂ ಸಾವಿರಾರು ಭಾರತೀಯ ಯುವಕರಿಗೆ ಬಲವಾದ, ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸ್ಪೂರ್ತಿಯಾಗಬಲ್ಲ ಒಬ್ಬ ‘ಅನಾಮಧೇಯ ಸಾಧಕನ’ (Unsung Hero) ಶ್ರಮವನ್ನು ಬೆಳಕಿಗೆ ತರಬಹುದು.
ಅನಂತಕುಮಾರ್ ಪುರಸ್ಕಾರ
AnanthKumar Pratishthana was established in memory of Shri AnanthKumar—a leader, a friend, a visionary, and above all, a true patriot. His life demonstrated that a young man from a middle-class family in a small town could rise to the highest levels of national leadership through dedication, integrity, hard work, and an unwavering commitment to the nation. Throughout his public life, Shri AnanthKumar worked to bring about transformational, people-centric policies. He played a pivotal role in expanding the Pradhan Mantri Bhartiya Janaushadhi Pariyojana, making quality medicines affordable to millions; introducing Neem-Coated Urea, which improved agricultural productivity while reducing the misuse of urea; and championing reforms that made air travel more affordable and accessible to ordinary citizens. He was also instrumental in building the Bharatiya Janata Party into a formidable force in Karnataka while contributing significantly to its growth across several northern states.
Beyond politics, he believed that nation-building must continue through social action. He founded Adamya Chetana, an organisation that has become a model for community service. Today, it serves nutritious and hygienic mid-day meals to thousands of children every day and has pioneered several innovative initiatives, including zero-waste kitchens, fossil-fuel-free community kitchens, large-scale tree plantation, Ananth Plate Bank for sustainable lifestyles, and many other impactful programmes.
To celebrate Shri AnanthKumar’s Vyaktitva (Personality), Kartrutva (Contribution), and Netrutva (Leadership), AnanthKumar Pratishthana undertakes several initiatives throughout the year.
One such initiative is the AnanthKumar Puraskaar, instituted to recognise individuals who, like Shri AnanthKumar, chose the path of selfless service and nation-building at an early stage of life, placing the nation above self.
We invite you to help us identify such inspiring individuals.
Eligibility:
- Be residing and actively working for society in any one of the 13 districts of North Karnataka: Belagavi, Bagalkote, Vijayapura, Dharwad, Gadag, Haveri, Uttara Kannada, Ballari, Koppal, Raichur, Yadgir, Kalaburagi and Bidar.
- If originally from South Karnataka or any other part of India, but presently residing in and serving the people of North Karnataka, they are eligible.
- Demonstrate sustained and exemplary service to society, with priority being given to community impact rather than individual achievements or personal success.
Areas of Contribution :
Nominations are invited from individuals working in areas such as – Healthcare and Medicine, Education, Engineering and Technology, Agriculture, Industry and Manufacturing, Entrepreneurship and Start-ups, Employment Generation, Environment and Sustainability, Water Conservation and Lake Rejuvenation, Rural Development, Innovation for Public Good, Culture and Heritage, and any other field contributing meaningfully to nation-building.
Selection Process :
After receiving the nominations, the communication team of AnanthKumar Pratishthana will visit the shortlisted nominees, interact with them and the communities they serve, document their work, and prepare detailed profiles.
These profiles will be presented before an independent Jury for evaluation.
The inspiring stories of the shortlisted nominees will be widely publicised so that society can celebrate positive role models and encourage more young people to dedicate themselves to nation-building.
The Award :
One outstanding individual will receive:
• The AnanthKumar Puraskaar
• A cash prize of ₹1,00,000
• A citation and public recognition.
Award Ceremony :
The award will be presented during a special function to be held on 5th December 2026 at Savai Gandharva Hall, Hubballi.
We request you to partner with us in identifying these extraordinary changemakers. Your nomination could bring to light an unsung hero whose work deserves recognition and whose story could inspire thousands of young Indians to dedicate themselves to building a stronger, more compassionate, and self-reliant nation.