ಅನಂತ ಚೇತನ — ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರ
ಅನಂತಕುಮಾರ್ ಪ್ರತಿಷ್ಠಾನವು ನಾಯಕತ್ವ, ನೀತಿ ನಿರೂಪಣೆ ಮತ್ತು ಭಾರತೀಯ ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯ ಪರಿಚಯ ಸೇರಿದಂತೆ ಹಲವು ಉದ್ದೇಶಗಳನ್ನು ಹೊಂದಿದೆ.
ಈ ಉದ್ದೇಶಗಳ ಈಡೇರಿಕೆಗಾಗಿ ಪ್ರತಿಷ್ಠಾನವು ‘ಅನಂತ ಚೇತನ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರ’ವನ್ನು ಪ್ರಾರಂಭಿಸಿದೆ. ಅನಂತ ಚೇತನವು ಕೇಂದ್ರ ಸರ್ಕಾರ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ಕೆಲವು ಪಠ್ಯಕ್ರಮಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ.
ಈ ನಿಟ್ಟಿನಲ್ಲಿ ಭಾರತೀಯ ಜ್ಞಾನ ಪದ್ಧತಿಯ ಭಾಗವಾಗಿರುವ ‘ಸಾಮಾಜಿಕ ಸಂಸ್ಥೆಗಳಾಗಿ ದೇವಾಲಯಗಳು’ ಎಂಬ ವಿಷಯದ ಕುರಿತು ರಾಜ್ಯದ ಖ್ಯಾತ ವಿಷಯತಜ್ಞರನ್ನು ಆಹ್ವಾನಿಸಿ, ಅವರ ಸಹಕಾರದೊಂದಿಗೆ ವಿಶೇಷ ಪಠ್ಯಕ್ರಮವನ್ನು ರೂಪಿಸಿದೆ.