ಯುವ ರಾಯಭಾರಿಗಳ ಉಪಕ್ರಮ.
ಹೊಸ ತಲೆಮಾರಿನಲ್ಲಿ ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರಾಭಿಮಾನದ ಮೌಲ್ಯಗಳನ್ನು ಬಿತ್ತುವ ಮಹತ್ವಾಕಾಂಕ್ಷೆಯೊಂದಿಗೆ ಅನಂತಕುಮಾರ್ ಪ್ರತಿಷ್ಠಾನವು ‘ಯುವ ರಾಯಭಾರಿಗಳ ಉಪಕ್ರಮ’ ವನ್ನು ಸೆಪ್ಟೆಂಬರ್ 22ರಂದು ಆರಂಭಿಸಿತು.
ಇಂದಿನ ಭಾರತವು ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರಾಭಿಮಾನದ ಮೌಲ್ಯಗಳನ್ನು ಹೊಸ ತಲೆಮಾರಿಗೆ ವರ್ಗಾಯಿಸಬೇಕಾದ ಮಹತ್ವದ ಹಂತದಲ್ಲಿದೆ. ಮಕ್ಕಳ ಬೆಳವಣಿಗೆಯ ಅವಧಿ ಅತ್ಯಂತ ಸೂಕ್ಷ್ಮ ಮತ್ತು ಪ್ರಭಾವಶಾಲಿಯಾಗಿದೆ. ಈ ವಯಸ್ಸಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ದೊರೆತರೆ, ಅದರ ಸಕಾರಾತ್ಮಕ ಪರಿಣಾಮ ಅವರ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರ ಮೇಲೂ ಬೀರುತ್ತದೆ..
ಈ ದೃಷ್ಟಿಯಿಂದ ಅನಂತಕುಮಾರ್ ಪ್ರತಿಷ್ಠಾನವು ಯುವ ರಾಯಭಾರಿಗಳ ಉಪಕ್ರಮವನ್ನು ರೂಪಿಸಿದೆ. ಇದು ಶಾಲೆಯ ಪಠ್ಯಾಧಾರಿತ ಕಲಿಕೆಗೆ ಮೌಲ್ಯಾಧಾರಿತ ಪ್ರಾಯೋಗಿಕ ಜ್ಞಾನದ ಸ್ಪರ್ಶ ನೀಡುತ್ತದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳು ಸಮಾಜದ ಆದರ್ಶ ವ್ಯಕ್ತಿಗಳ ಮಾರ್ಗದರ್ಶನ ಪಡೆಯುತ್ತಾರೆ.
ಪರಿಸರಸ್ನೇಹಿ ನಡವಳಿಕೆಯನ್ನು ಅಭ್ಯಾಸ ಮಾಡುತ್ತಾರೆ ಹಾಗೂ ತಮ್ಮ ಸಹಪಾಠಿಗಳಿಗೆ ಪ್ರೇರಣೆ ನೀಡುವ ನಾಯಕರಾಗಿ ಬೆಳೆಯುತ್ತಾರೆ



