ಗ್ರಾಮಚೇತನ
ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ “ಗ್ರಾಮ ಚೇತನ” ಎಂಬ ಹೆಸರಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮಹಿಳಾ ಸಬಲೀಕರಣ ಹಾಗೂ ಚುನಾಯಿತ ಮಹಿಳೆಯರಿಗೆ ಪ್ರಶಿಕ್ಷಣ ನೀಡುವ ತರಬೇತಿ ಕೇಂದ್ರ, ನೇತೃತ್ವ ನಿರ್ಮಾಣ ಹಾಗೂ ಸಂವಹನ, ಸ್ಥಳೀಯ ಇತಿಹಾಸ ಮತ್ತು ಪರಿಸರ ಸಂವೇದನೆ ಕುರಿತು ತರಬೇತಿ ನೀಡಲು ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.
ಈ ವಿಷಯದ ಬಗ್ಗೆ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಗಮನಕ್ಕೆ ತಂದಾಗ ,ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ನ ಇನ್ನೂ ಅನೇಕ ಚುನಾಯಿತ ಸದಸ್ಯರಿಗೆ ನಾಯಕತ್ವ ತರಬೇತಿಯ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಅನಂತಕುಮಾರ್ ಪ್ರತಿಷ್ಠಾನ ಹೊಂದಿದೆ.